Tuesday, 10 April 2018

ನನಗೂ ಲವ್ವಾಗಿದೆ (ಕೆ. ಗಣೇಶ ಕೋಡೂರು)



ಐದನೇ ಕ್ಲಾಸಿನಲ್ಲಿದ್ದಾಗಲೇ ಇವಳೆಷ್ಟು ಚೆಂದ ಇದ್ದಾಳೆ,ಲವ್ ಮಾಡಿದರೆ ಇವಳನ್ನೇ ಲವ್ ಮಾಡಬೇಕು ಎಂದು ಆಸೆ ಪಟ್ಟು ಅವಳನ್ನೇ ನೋಡಿ ನೋಡಿ, ಕ್ಲಾಸಿನಲ್ಲಿ ನಾನು ಹೀಗೆ ಗುರಾಯಿಸಿದ್ದಕ್ಕೆ ಅವಳು ಟೀಚರ್ರಿಗೆ ಹೇಳಿ, ಅವರು ಹೊಡೆದು, ಅದರಿಂದ ಸಿಟ್ಟು ಅವಮಾನವೆಲ್ಲ ಆಗಿ, ಸ್ಕೂಲು ಬಿಟ್ಟು ಮನೆಗೆ ಬರುವಾಗ ಅವಳ ಹಿಂದೇ ಬಂದು ರಸ್ತೆಯಲ್ಲೇ ಅವಳ ಜಡೆ ಹಿಡಿದೆಳೆದು ಸಿಟ್ಟುಕಳೆದುಕೊಂಡು ಮತ್ತೆ ಅವಳೆಡೆಗೆ ಪ್ರೀತಿ ಚಿಮ್ಮಿಸಿಕೊಂಡ ಬದುಕಿನ ಆ ಕ್ಷಣವೇ ಅಲ್ಲವಾ ಅದೇ ಮೊದಲ ಬಾರಿ ಈ ಬದುಕಿನಲ್ಲಿ ನನಗೂ ಲವ್ವಾಗಿದೆ ಅನ್ನಿಸಿದ್ದು...
ಹೀಗೆ ಬದುಕಿನಲ್ಲಿ ಮೊದಲ ಬಾರಿ ಮನೆಯಾಚೆಗೂ ಒಂದು ಪ್ರೀತಿಯಿದೆ ಎಂದು ತೋರಿಸಿಕೊಟ್ಟ ಕೋಡೂರಿನ ಪ್ರೈಮರಿ ಸ್ಕೂಲಿನ ನನ್ನ ಕ್ಲಾಸ್ ಮೇಟ್ ಪುಟ್ಟ ಸುಂದರಿಗೆ ಅರ್ಪಣೆ.

ಹುಟ್ಟಿದ್ದೇವೆ. ಹುಟ್ಟಿದ ನಂತರ ಇನ್ನೂ ಬದುಕಿದ್ದೇವೆ. ಬದುಕಿರುವ ನಮಗೊಂದು ಹೃದಯವಿದೆ, ಮನಸ್ಸಿದೆ. ಒಂದಿಷ್ಟು ಭಾವನೆಗಳಿವೆ, ಕನಸುಗಳಿವೆ. ಬದುಕಿನಲ್ಲಿ ಬೇಜಾನ್ ಆಸೆಗಳಿವೆ ಎಂದೆಲ್ಲ ಅಂದುಕೊಂಡಿರುವ ಎಲ್ಲರಿಗೂ ಈ ಬದುಕಿನ ಒಂದಲ್ಲ ಒಂದು ದಿನ ಪ್ರೀತಿ ಎನ್ನುವುದು ಆಗಲೇಬೇಕು. 
(ಮುನ್ನುಡಿ ಹಾಗೂ ಬೆನ್ನುಡಿಯಿಂದ)

ಪುಸ್ತಕ:ನನಗೂ ಲವ್ವಾಗಿದೆ
ಲೇಖಕರು: ಕೆ. ಗಣೇಶ ಕೋಡೂರು
ಪ್ರಕಾಶಕರು: ಬೆನಕ ಬುಕ್ಸ್  ಬ್ಯಾಂಕ್, ಕೋಡೂರು, ಹೊಸನಗರ, ಶಿವಮೊಗ್ಗ.
ಮೋ: 73384 37666.
ಬೆಲೆ:₹ 50

ಮಾಹಿತಿ ಸಂಗ್ರಹ: ಆದರ್ಶ ಜಯಣ್ಣ.

No comments:

Post a Comment