Sunday 2 April 2017

ಬಾಟಮ್ ಐಟಮ್ (8 ಭಾಗಗಳು) ರವಿ ಬೆಳಗೆರೆ


Bottom item (Ravi belagere) ಗಂಡ ಹೆಂಡತಿಯ ಜಗಳದಿಂದ ಹಿಡಿದು, ನೌಕರಿಗೊಂದು ಅರ್ಜಿ ಬರೆಯುವುದು ಹೇಗೆ ಅಂತ ವಿವರಿಸುವ ತನಕ ಎಲ್ಲ ಸಂಗತಿಗಳನ್ನು ತೆಕ್ಕೆಗೆ ತೆಗೆದುಕೊಂಡ ಪೇಜಿನ ಬುಡದ ಪುಟ್ಟ ಅಂಕಣ 'ಬಾಟಮ್ ಐಟಮ್'. ಎಷ್ಟೋಸಲ ನನ್ನ ರಣ ಗಂಭೀರ ಬರಹಗಳಾದ ಖಾಸ್ ಬಾತ್, ಹಲೋಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆ ತೆಗೆದುಕೊಂಡ ಅಂಕಣವಿದು. ಏನು ತಪ್ಪಿದರೂ, ದೇವರ ನೆತ್ತಿಯ ಮೇಲೆ ಹೂವು ತಪ್ಪುವುದಿಲ್ಲ ಎಂಬಂತೆ- ಈ ಬಾಟಮ್ ಐಟಮ್ಮೊಂದು ಇಲ್ಲದೇ ಹೋದರೆ, ಆ ಸಂಚಿಕೆ ಪೂರ್ಣವಾಗುವುದೇ ಇಲ್ಲ. ಪತ್ರಿಕೆಯ ಮೂರನೇ ಪುಟಕ್ಕೊಂದು ಆಕಾರ ಸಿಗುವುದಿಲ್ಲ. ದೊಡ್ಡ ಅಂಗಿ, ಗಿಡ್ಡ ಲಂಗ ಧರಿಸಿ ನಿಂತಿರುವ ತುಂಟ ಹುಡುಗಿಯ ಹಾಗೆ ಕಾಣುವ 'ಹಾಯ್ ಬೆಂಗಳೂರ್' ನ ಮೂರನೇ ಪುಟದ ಈ ಗಿಡ್ಡಲಂಗವೇ 'ಬಾಟಮ್ ಐಟಮ್'.

(ರವಿ ಬೆಳಗೆರೆ ಅವರು ಬರೆದ ಬೆನ್ನುಡಿಯಿಂದ ಆಯ್ದದ್ದು)

ಕೃತಿ: ಬಾಟಮ್ ಐಟಮ್.
ಲೇಖಕರು: ರವಿ ಬೆಳಗೆರೆ.
ಪ್ರಕಾರ: ವ್ಯಕ್ತಿತ್ವ ವಿಕಸನ (ಅಂಕಣ ಬರಹಗಳ ಸಂಗ್ರಹ)
ಪ್ರಕಾಶಕರು: ಭಾವನಾ ಪ್ರಕಾಶನ,
ಕದಿರೇನಹಳ್ಳಿ, ಪದ್ಮನಾಭನಗರ,
ಬೆಂಗಳೂರು 560070.
ದೂರವಾಣಿ: 080-26790804, 9448051726.
ಲಭ್ಯವಿರುವ ಮಳಿಗೆಗಳು: ಬೆಳಗೆರೆ ಬುಕ್ಸ್ ಅಂಡ್ ಕಾಫೀ, ಸಪ್ನ ಬುಕ್ ಹೌಸ್.

No comments:

Post a Comment