Monday 15 May 2017

ಕಾರ್ಗಿಲ್ ಕದನ-ಕಥನ (ಚಕ್ರವರ್ತಿ ಸೂಲಿಬೆಲೆ)



Kargil kadana-kathana (Chakravarthi sulibele) ಮರೆಯೋದು ನಮಗಿರುವ ಒಳ್ಳೆಯ ಗುಣವೂ ಹೌದು, ಕೆಟ್ಟದ್ದೂ ಹೌದು. ಆದರೆ ಕೆಲವೊಂದನ್ನು ಮರೆಯಲೇಬಾರದು ಎನ್ನುವ ಪ್ರಜ್ಞೆ ನಮಗೆಲ್ಲ ಇರಬೇಕು. ಈ ದೇಶದ ಇತಿಹಾಸ, ಪರಂಪರೆ ಅದೆಷ್ಟು ಆಳವೆಂದರೆ ಎಲ್ಲವನ್ನು ಒಬ್ಬನ ಜೀವಿತಾವಧಿಯಲ್ಲಿ ಮೆಲುಕು ಹಾಕುವುದು ಕಷ್ಟವಾದೀತು. ಹಾಗಿರುವಾಗ ನಾವು ಕಂಡ ಘಟನೆಗಳನ್ನೇ ಒಮ್ಮೆ ನೆನಪಿಸಿಕೊಳ್ಳದಿದ್ದರೆ ಹೇಗೆ?

ಶಾಂತಿಯ ಹೊತ್ತಲ್ಲಿ ಮಗ ತಂದೆಯ ಶವಕ್ಕೆ ಅಂತ್ಯಸಂಸ್ಕಾರ ಮಾಡಿದರೆ, ಯುದ್ಧದ ಹೊತ್ತಲ್ಲಿ ತಂದೆಯೇ ಮಗನ ಚಿತೆಗೆ ಕೊಳ್ಳಿ ಇಡುತ್ತಾನೆ. ಕಾರ್ಗಿಲ್ ಯುದ್ಧ ಇಂತಹ ಅನೇಕ ಘಟನಾವಳಿಗಳಿಗೆ ಮೂಕ ಪ್ರೇಕ್ಷಕವಾಯ್ತು. ಅದು ಪಾಕಿಸ್ತಾನದೆಡೆಯಿಂದ ಅನಿರೀಕ್ಷಿತ ಧಾಳಿ, ಆದರೆ ನಮ್ಮೆಡೆಯಿಂದ ನಿರೀಕ್ಷಿತ ಪ್ರತ್ಯುತ್ತರ. ಈ ಗೆಲುವಿನ ಶ್ರೇಯಸ್ಸೆಲ್ಲ ಕಾದಾಡಿದ, ಮಡಿದ ಸೈನಿಕರಿಗೆ ಸಲ್ಲಬೇಕು. ಅವರದ್ದೇ ವೀರಗಾಥೆಯ ಮಥನ ಕಾರ್ಗಿಲ್ ಕದನ-ಕಥನ.

(ಕೃತಿಯ ಮುನ್ನುಡಿ ಹಾಗೂ ಬೆನ್ನುಡಿಯಿಂದ ಆಯ್ದದ್ದು)

ಕೃತಿ: ಕಾರ್ಗಿಲ್ ಕದನ-ಕಥನ 
ಲೇಖಕರು: ಚಕ್ರವರ್ತಿ ಸೂಲಿಬೆಲೆ.
ಪ್ರಕಾರ: ಇತಿಹಾಸ
ಪ್ರಕಾಶಕರು: ವಿಕ್ರಮ್ ಪ್ರಕಾಶನ, ನಂ-240,
5ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ,
ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ,
ಹೆಬ್ಬಾಳ, ಬೆಂಗಳೂರು 560024.
ದೂರವಾಣಿ: 8971091760

No comments:

Post a Comment