Monday 15 May 2017

ಲೈಫ್ ಈಸ್ ಬ್ಯೂಟಿಫುಲ್ (ಜೋಗಿ)




Life is beautiful (Jogi)

ಉರಿಬಿಸಿಲಿನ ಮಧ್ಯಾಹ್ನ ತುಂತುರು ಮಳೆಯಾಗುತ್ತದೆ. ಕರಿಬೆಟ್ಟದ ತಪ್ಪಲಲ್ಲಿ ಬಿಳಿಹೂವುಗಳು ಅರಳುತ್ತವೆ. ಉಬ್ಬುಹಲ್ಲಿನ ಹುಡುಗಿ ಜೀವ ಹಿಂಡುವಂತೆ ಹಾಡುತ್ತಾಳೆ. ಕಪ್ಪಗಿನ ಹುಡುಗ ಚೆಂದದ ಕಥೆ ಬರೆಯುತ್ತಾನೆ. ಪ್ರೇಮಿಸಿದ ಹುಡುಗಿಯ ಹೆಸರನ್ನು ಮಗಳಿಗಿಟ್ಟು ಸಂಭ್ರಮಿಸುತ್ತೇವೆ. ಕೈಕೊಟ್ಟ ಪ್ರೇಮಿಯನ್ನು ಕಾಲವೇ ಮರೆಸುತ್ತದೆ. ಬತ್ತಿಹೋದ ನದಿಯಲ್ಲೂ ಮತ್ತೆ ನೀರು ಹರಿಯುತ್ತದೆ. ಟ್ರಾಫಿಕ್ಕು ಕಿಕ್ಕಿರಿದ ರಸ್ತೆಯನ್ನೂ ಪುಟ್ಟ ಮಗು ಕ್ಷೇಮವಾಗಿ ದಾಟಿಹೋಗುತ್ತದೆ. ಮಿಸ್ ಕಾಲಿನ ಆಚೆ ತುದಿಯಲ್ಲಿ ಮುಗುಳ್ನಗೆಯೊಂದು ಕಾದಿರುತ್ತದೆ. ಎಲ್ಲೋ ಕೇಳಿದ ಹಾಡು ಜೀವನಪೂರ್ತಿ ಕಾಯುತ್ತದೆ. ಕತ್ತಲ ರಾತ್ರಿಯಲ್ಲಿ ಅವಳ ನಸುನಗೆ ದಾರಿ ತೋರುತ್ತದೆ. ಪ್ರತಿ ಮಧ್ಯಾಹ್ನವೂ ಸವೆದು ಸವೆದು ಅವಳ ನೆನಪಿನಂಥಾ ಸಂಜೆಯಾಗುತ್ತದೆ. ದೇವರು ದೂರದಲ್ಲೆಲ್ಲೋ ಕುಳಿತು ನೋಟುತ್ತಿರುತ್ತಾನೆ. ನಮ್ಮ ಎದುರಿಗಿನ ತಿಳಿಯಾದ ಸರೋವರವನ್ನು ಅವನು ತಪ್ಪಿಯೂ ಕಲಕುವುದಿಲ್ಲ.
ಅದಕ್ಕೇ,
ಲೈಫ್ ಈಸ್ ಬ್ಯೂಟಿಫುಲ್.

(ಕೃತಿಯ ಬೆನ್ನುಡಿಯಿಂದ ಆಯ್ದದ್ದು)

ಕೃತಿ: ಲೈಫ್ ಈಸ್ ಬ್ಯೂಟಿಫುಲ್
ಲೇಖಕರು: ಜೋಗಿ
ಪ್ರಕಾರ: ವ್ಯಕ್ತಿತ್ವ ವಿಕಸನ.
ಪ್ರಕಾಶಕರು: ಸಾವಣ್ಣ ಎಂಟರ್ ಪ್ರೈಸಸ್, ನಂ-57,
1ನೇ ಮಹಡಿ, ಪುಟ್ಟಣ್ಣ ರಸ್ತೆ, 
ಬಸವನಗುಡಿ, ಬೆಂಗಳೂರು 560004.
ದೂರವಾಣಿ: 91-80-26607011
ಇ-ಮೇಯ್ಲ್: info@sawannabooks.com
ವೆಬ್ಸೈಟ್: www.sawannabooks.com
ಬೆಲೆ ರೂ. 100/-

No comments:

Post a Comment