Thursday 18 May 2017

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ


Himalayada mahaatmara sannidhiyalli

'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ' ಈ ಕೃತಿಯು ಸ್ವಾಮಿ ಅಜಯ ಅವರು ಆಂಗ್ಲ ಭಾಷೆಯಲ್ಲಿ ಸಂಪಾದಿಸಿದ ಸ್ವಾಮಿ ರಾಮ ಇವರ ಆಧ್ಯಾತ್ಮಿಕ ಅನುಭವಗಳ 'ಲಿವಿಂಗ್ ವಿತ್ ದಿ ಹಿಮಾಲಯನ್ ಮಾಸ್ಟರ್ಸ್' ಕೃತಿಯ ಕೃತಿಯ ಕನ್ನಡ ಅನುವಾದ. ಡಿ.ಕೆ. ಶ್ಯಾಮಸುಂದರ್ ರಾವ್ ಇವರು ಕೃತಿಯ ಕನ್ನಡ ಅನುವಾದಕರು. ಆಧ್ಯಾತ್ಮಿಕ ವಿಚಾರಗಳ ಅನ್ವೇಷಣೆಯ ದೃಷ್ಟಿಯಿಂದ ನೋಡಿದಾಗ ಈ ಕೃತಿಯು ಮೇರು ಮಟ್ಟದಲ್ಲಿದ್ದು, ಕನ್ನಡಿಗರಲ್ಲೂ ಎಲ್ಲಾ ವರ್ಗದ ದೃಷ್ಟಿ-ಧೋರಣೆಗಳು ತಣಿಯಲಿ ಎಂಬುದು ಲೇಖಕರ ಆಶಯ. ಪೂಜ್ಯ ಸ್ವಾಮಿ ರಾಮರು ಹಿಮಾಲಯದ ಮಹಾತ್ಮರ ಶ್ರೇಷ್ಠ ಪರಂಪರೆಗೆ ಸೇರಿದವರು. ವಿಜ್ಞಾನ, ದಾರ್ಶನಿಕ, ಯೋಗ ವಿಚಾರಗಳಲ್ಲಿ ಹಲವಾರು ಸಾಧಕರಿಗೆ ಮಾರ್ಗದರ್ಶಿಯಾಗಿ ಹಗಲು-ಇರುಳುಗಳ ಬಹುಭಾಗ ಧ್ಯಾನಕ್ಕೆ ಮೀಸಲಿರಿಸುತ್ತಿದ್ದರು. ಆಧ್ಯಾತ್ಮಿಕ ಕಥನ ಸರಣಿಯ ಈ ಕೃತಿಯು ಕೇವಲ ಸ್ವಾಮಿ ರಾಮರ ಜೀವನ ಕಥನವಾಗಿರದೆ, ಹಿಮಾಲಯದ ಹಿರಿಯರ ವ್ಯಕ್ತಿ ಚಿತ್ರಣ ಹಾಗೂ ಸ್ವಾಮೀಜಿಯವರು ಬದುಕಿ ಬೆಳೆದ ವಾತಾವರಣದ ಕಿರುಪರಿಚಯವನ್ನು ಮನುಕುಲಕ್ಕೆ ತಿಳಿಸುವುದೇ ಮೂಲ ಲೇಖಕರಾದ ಸ್ವಾಮಿ ಅಜಯರ ಮುಖ್ಯ ಉದ್ದೇಶ. ಈ ಕೃತಿಯಲ್ಲಿ ವರ್ಗೀಕರಿಸಲ್ಪಟ್ಟ ಒಂದೊಂದು ಕಥೆಯೂ ಬದುಕಿಗೆ ಅತ್ಯಮೂಲ್ಯವಾದ ಪಾಠ. ಹಿಮಾಲಯದ ಅಸಂಖ್ಯಾತ ಸಾಧು-ಸಂತರ ಮತ್ತು ಮಹಾತ್ಮರ ಶಿಸ್ತಿನ ಬದುಕು, ಅನುಭವಗಳು, ಸರಳತೆ, ನೈಸರ್ಗಿಕ ಶಕ್ತಿಯಲ್ಲಿ ನ ಅಪಾರವಾರವಾದ ನಂಬಿಕೆಗಳೇ ಅವರನ್ನ ಪ್ರಾಕೃತಿಕವಾದ ವೈಪರೀತ್ಯ ಗಳಿಂದ ರಕ್ಷಣೆ ನೀಡುತ್ತದೆ. ಹೀಗೆ ಪರಿಸರಕ್ಕೆ ಹತ್ತಿರವಾಗಿ ಬದುಕಿನಾನಂದವನ್ನ ಸವಿಯುವ ಸರಳ ಸೂತ್ರಗಳಿಂದ ಅಲಂಕೃತವಾದ ಈ ಹೊತ್ತಿಗೆಯು ಉತ್ತಮ ಮಾರ್ಗದರ್ಶನ ವನ್ನೂ ನೀಡುವುದರಿಂದ ಮೆಚ್ಚುಗೆ ಯ ಕೃತಿಯಾಗಿದೆ.

ಕೃತಿ:ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ
ಅನುವಾದಕರು: ಡಿ.ಕೆ.ಶ್ಯಾಮಸುಂದರ ರಾವ್
ಪ್ರಕಾರ: ಆಧ್ಯಾತ್ಮಿಕ ಕಥನ
ಪ್ರಕಾಶಕರು:ಕಾಮಧೇನು ಪುಸ್ತಕ ಭವನ
ನಂ.5/1, ನಾಗಪ್ಪ ರಸ್ತೆ,ಶೇಷಾದ್ರಿಪುರ,
ಬೆಂಗಳೂರು-560020
ಮೂಲ ಕೃತಿ: ಲಿವಿಂಗ್ ವಿತ್ ದಿ ಹಿಮಾಲಯನ್ ಮಾಸ್ಟರ್ಸ್
ಆಂಗ್ಲ ಲೇಖಕರು: ಸ್ವಾಮಿ ಅಜಯ
ಮೂಲ ಪ್ರಕಾಶಕರು: HIMALAYAN INTERNATIONAL INSTITUTE OF YOGA SCIENCE AND PHILOSOPHY OF THE U.S.A
HONESDALE, PENNSYLVANIA

(ಮಾಹಿತಿ ಸಂಗ್ರಹ ಹಾಗೂ ನಿರೂಪಣೆ: ಪ್ರಜ್ಞಾ ಜಿ.ಕೆ.)

No comments:

Post a Comment