Friday 19 May 2017

ಮಾಂಡೋವಿ (ರವಿ ಬೆಳಗೆರೆ)



Mandovi (Ravi Belagere)

ಪ್ರೀತಿಯ ಕಡು ದಾರಿದ್ರ್ಯ, ಮಿತಿಯಿರದ ಪ್ರೀತಿಯ ಐಶ್ವರ್ಯ

ಇವೆರೆಡನ್ನೂ ಅನುಭವಿಸುವ ವ್ಯಕ್ತಿಗೆ ಪ್ರೀತಿ ಒಂದು ಸ್ಥಿತಿ  ಮಾತ್ರವಲ್ಲ, ಅದೊಂದು ನಿರಂತರ ಹರಿಯುವ ನದಿಯ ಸೆಳೆತ. ಎಷ್ಟು ಮುಕ್ಕಿದರೂ ಇಂಗದ ಹಸಿವು. ಎಷ್ಟು ತುಂಬಿದರೂ ತುಂಬದ ಭಿಕ್ಷಾಪಾತ್ರೆ. 'ಮಾಂಡೋವಿ' ಬರಿಯ ಲೇಖನಿಯಿಂದ ಇಳಿದುಬಂದ ಕತೆ ಮಾತ್ರವಲ್ಲ,  ಇದು ಎಲ್ಲ ಅಸಹಾಯಕತೆ, ಅವಮಾನ, ಖಿನ್ನತೆಗಳನ್ನು ಹಿಮ್ಮಡಿಯ ಕೆಳಗೆ ಮೆಟ್ಟಿ ಎದ್ದು ನಿಲ್ಲುವ ಫಕೀರನ ಛಲ. ಇದು ಹೆಮ್ಮರದ ಮೇಲಿನ ಹೆಜ್ಜೇನಿಗಾಗಿ ಕೆಳಗೆ ಶತಪಥ ಹಾಕುವ ಅತೃಪ್ತ ಕರಡಿಯ ಕನವರಿಕೆ. 

ಇದು ಮರಳಲ್ಲಿ ರೆಕ್ಕೆ ಹುದುಗಿಸಿ, ಮೈಮರೆತು ತೀರಕ್ಕೆ ಬರುವ ಬಂಗಾರದ ಮೀನಿಗಾಗಿ ಕಾಯುತ್ತ, ಕಾಯುತ್ತ ಶತಮಾನ ಕಳೆದುಬಿಡುವ ಹಕ್ಕಿಯ ಸಂಯಮ. ಕೊನೆಗೂ ಮಾಂಡೋವಿ ದಕ್ಕಿದಾಗ ತನ್ನ ಜೊತೆ ಇಡೀ ಜಗತ್ತೇ ಸಮಾಧಾನ, ನಿಟ್ಟುಸಿರು ನೋಡುವಂತೆ ಮಾಡುವ ಚಲಪತಿಯ ನಿರಾಳ ಇದು. ಇಷ್ಟು ಸುಂದರವಾಗಿ ಪ್ರೇಮಿಸಲೂ ಬರುತ್ತದೆ ಎನ್ನುವುದಕ್ಕೆ ತೋರುಬೆರಳು ಈ ಕಾದಂಬರಿ. ಮಾರ್ಕ್ವೆಜ್ ಇಷ್ಟು ಅದ್ಭುತವಾಗಿ ಕನ್ನಡಕ್ಕೆ ಹಿಂದೆಂದೂ ಬಂದಿರಲಿಲ್ಲ. 

(ಪ್ರತಿಭಾ ನಂದಕುಮಾರ್ ಅವರು ಬರೆದ ಬೆನ್ನುಡಿಯಿಂದ ಆಯ್ದದ್ದು)

ಕೃತಿ: ಮಾಂಡೋವಿ
ಲೇಖಕ: ರವಿಬೆಳಗೆರೆ
ಪ್ರಕಾರ: ಕಾದಂಬರಿ (ಪ್ರೇಮ)
ಮೂಲಕೃತಿ (ಪ್ರೇರಣೆ): ಲವ್ ಇನ್ ದ ಟೈಮ್ ಆಫ್ ಕಾಲರಾ
ಲೇಖಕರು: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್
ಪ್ರಕಾಶಕರು: ಭಾವನಾ ಪ್ರಕಾಶನ,
ಕದಿರೇನಹಳ್ಳಿ, ಪದ್ಮನಾಭನಗರ,
ಬೆಂಗಳೂರು 560070.
ದೂರವಾಣಿ: 080-26790804, 9448051726.
ಲಭ್ಯವಿರುವ ಮಳಿಗೆಗಳು: ಬೆಳಗೆರೆ ಬುಕ್ಸ್ ಅಂಡ್ ಕಾಫೀ, ಸಪ್ನ ಬುಕ್ ಹೌಸ್.
ಬೆಲೆ ರೂ. 125/-

No comments:

Post a Comment